sportzgazette.com
ಕಾಲೇಜುಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ - SportzGazette
ಕಾಲೇಜುಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯದ ಪ್ರಕರಣಗಳನ್ನು ನೋಡುವಾಗ ನನ್ನ ಕಾಲೇಜು ದಿನಗಳು ಥಟ್ಟನೆ ನೆನಪಾಗುತ್ತವೆ. ಈ ವಿದ್ಯಮಾನ ಇವತ್ತಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಆದರೆ ಆಗ ಅಷ್ಟಾಗಿ ಬಯಲಿಗೆ ಬರುತ್ತಿರಲಿಲ್ಲವೇನೋ ಎಂಬುದು ನನ್ನ ಭಾವನೆ. ಅದಕ್ಕೆ ಕಾರಣಗಳು ಹತ್ತಾರು ಇರಬಹುದು. ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು. ನಾನು ಸರ್ಕಾರಿ ದಂತವೈದ್ಯಕೀಯ ಕಾಲೇಜಿಗೆ ಸೇರಿದ್ದ ಆ ದಿನಗಳು. (ಅದನ್ನು ಪೂರ್ಣಗೊಳಿಸದೆ ಮುಂದೆ ನನ್ನ ದಾರಿ ನಾ ಹಿಡಿದೆ ಎಂಬುದು ನಂತರದ...