peoplestv.in
ಮುಂಡರಗಿ : ಗುರಿ ತಲುಪುವವರೆಗೆ ಛಲ ಬಿಡದಿರಿ ! | People's TV
ಮುಂಡರಗಿ: ಯುವಕರು ಕೀಳರಿಮೆ ಬಿಟ್ಟು, ಸಾಧಿಸುವ ಛಲದೊಂದಿಗೆ ಸಾರ್ಥಕತೆಯ ಬದುಕಿನತ್ತ ನಡೆಯಬೇಕು. ದೇಶ ಸಶಕ್ತವಾಗಬೇಕಾದರೆ ಶಿಕ್ಷಣ ಅತ್ಯವಶ್ಯ. ವಿದ್ಯಾರ್ಥಿಗಳು ಸ್ವಯಂ ಕೃಷಿಯಿಂದ ಮುಂದಾಗಬೇಕು ಎಂದು ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ ಹೇಳಿದರು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಾಲೇಜ್​ನಲ್ಲಿ ಕ.ರಾ. ಬೆಲ್ಲದ ಮಹಾವಿದ್ಯಾಲಯ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ ಮಹಾತ್ಮರ ಆದರ್ಶಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಸುಂaದರ ಸಮಾಜ ಕಟ್ಟಬೇಕು. ಭಾವೋದ್ವೇಗಕ್ಕಿಂತ ಭಾವನೆಗಳು ಮೊಳಕೆ ಒಡೆಯಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಒತ್ತು ನೀಡಬೇಕು. ಎಲ್ಲರಿಗೂ ಅವಕಾಶಗಳು ಇರುತ್ತವೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಯುವಕರು ಮಾನವಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಹಾತ್ಮರ ಮತ್ತು ಸಾಧಕರ ಆದರ್ಶ ಪಾಲನೆಯೊಂದಿಗೆ ಸುಂದರ ಜೀವನ ರೂಪಿಸಿಕೊಳ್ಳಬೇಕು ಎಂದರು. ದೆಹಲಿ ಎನ್​ಸಿಸಿ ಪರೇಡ್​ಗೆ ಆಯ್ಕೆಯಾಗಿದ್ದ ಪ್ರದೀಪ ರಾಠೋಡ್ ಹಾಗೂ ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 10ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಕಮರುನ್​ಬೀ ನಾಗರಹಳ್ಳಿ ಅವರನ್ನು ಸನ್ಮಾನಿಸಲಾಯಿತು. ರವಿ ಚನ್ನಣ್ಣನವರ ಅವರನ್ನು