peoplestv.in
ಗದಗ : ಮುಂದುವರಿದಿದೆ ಟ್ರಾಫಿಕ್ ಗೋಳು ! | People's TV
ಗದಗ : ಜಿಲ್ಲೆಯಾಗಿ ದಶಕ ಕಳೆದರೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ವ್ಯವಸ್ಥೆ ಮಾತ್ರ ಸುಧಾರಣೆ ಕಂಡಿಲ್ಲ. ಪ್ರಮುಖ ರಸ್ತೆ, ಮಾರುಕಟ್ಟೆ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸರಿಯಿಲ್ಲದ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಅದರ ಜೊತೆಗೆ ವಾಹನಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿದೆ. ಇದರಿಂದ ಸಂಚಾರ ದಟ್ಟಣೆ ಕೂಡ ಏರಿಕೆ ಕಂಡು ಬರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತಲೆಬಿಸಿ ಆರಂಭವಾಗಿದೆ. ಗದಗ ನಗರದಲ್ಲಿ ಮೂರು ಸಂಚಾರ ಸಿಗ್ನಲ್​ಗಳಿದ್ದು, ಅದರಲ್ಲಿ ಮುಳಗುಂದ ನಾಕಾ ಹಾಗೂ ಭೂಮರಡ್ಡಿ ವೃತ್ತದಲ್ಲಿ ಮಾತ್ರ ಸಂಚಾರ ಸಿಗ್ನಲ್​ಗಳು ಕಾರ್ಯನಿರ್ವಹಿಸುತ್ತಿವೆ. ಮಹಾತ್ಮಾ ಗಾಂಧಿ ವೃತ್ತದಲ್ಲಿ ಅಳವಡಿಸಿರುವ ಸಂಚಾರ ಸಿಗ್ನಲ್ ತಾಂತ್ರಿಕ ಕಾರಣಗಳಿಂದ ಕಳೆದ 5 ವರ್ಷಗಳಿಂದ ಬಂದ್ ಆಗಿದೆ. ಗದಗ ನಗರದಲ್ಲೇ ಪ್ರಮುಖವಾಗಿರುವ ಈ ವೃತ್ತದ ಮೂಲಕ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಮಾರುಕಟ್ಟೆಗೆ ಸಾರ್ವಜನಿಕರು ಆಗಮಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಿದ್ದರೂ ಸಿಗ್ನಲ್ ಸಮಸ್ಯೆ ಮುಂದುವರಿದಿದೆ. 2016ರ ಏಪ್ರಿಲ್ 30ಕ್ಕೆ ಜಿಲ್ಲೆಯಾದ್ಯಂತ ಬೈಕ್, ಕಾರು, ಟ್ರ್ಯಾಕ್ಟರ್, ಟ್ರಕ್ ಹಾಗೂ ಇತರೆ ಸೇರಿ 1,54,195 ವಾಹನಗಳಿದ್ದವು. 2019ರ ಜನವರಿ 31ರ ವರೆಗೆ ಜಿಲ್ಲೆಯಲ್ಲಿ 1,99,755 ವಾಹನಗಳು ಸಾರಿಗೆ ಇಲಾಖೆಯಲ್ಲಿ