kannda

ಆ ಸಂಜೆ

ಆ ಸಂಜೆ ಕತ್ತಲು ಕಾಲಿರಿಸುವ ಮೊದಲು,
ಆ ಮೊದಲ ಭೇಟಿ, ಇಬ್ಬರ ಮಾತಿನ ತೊದಲು.
ಆ ಪಕ್ಷಿಗಳ ಚಿಲಿಪಿಲಿ, ಸೂರ್ಯನ ಸುವರ್ಣ ಕಿರಣಗಳು,
ಕರೆತಂದಳು ಅವಳ ಕಣ್ಣಲಿ ಸುಂದರ ಸುಸಂಜೆಯನು.

ನನ್ನ ಎದೆಗೆ ಎಂದೂ ಆಗದ ಸಮಾರಂಭದ ಅನುಭವ,
ಸಮೀಪದಲ್ಲೇ ಕೈಗೆಟ್ಟುವ ಕುಂತ ಉಳಿದ ಕನಸುಗಳು.
ಅವಳ ಇಂಪಾದ ನೆನಪುಗಳ ಮಂಜಿನ ಮನೆಯ ಸಂಬ್ರಮ,
ಯಾರ ಕಿವಿಗೊ ಕೇಳದ, ಹಾಡದೇ ಉಳಿದ ಸವಿಗಾನ.


ಆ ಸಂಜೆ ಕಳೆದುಹೋದ,ದುರ್ಬಲವಾದ ಆತ್ಮಗಳ ಭೇಟಿ,
ನಮ್ಮ ಕಂದು ನಯನಗಳ ಭಾವನೆಗಳ ಭೇಟಿ.
ನಮ್ಮ ಮರೆತುಹೋದ ಪ್ರಥಿಬೆಗಳ ಪುನರ್ಅನ್ವೇಷಣೆಯ ಸುಸಂಜೆ,
ಎಲ್ಲಕಿಂತ ಅತೀ ಸೊಗಸಾಗಿ ಕಂಡ ಮುಸ್ಸಂಜೆ.

ವಿದಾಯ ಹೇಳುವ ಮುನ್ನ ಕಂಡ ಆ ನೋಟ ,
ಗೆಳೆಯ ಇರುವೆಯ ಸದಾ ಜೊತೆಗೆ ಅಥವ ಇದೇ ಕೊನೆಯ?
ನಾನೆನಿಸಿಕೊಂಡದನ್ನ ಕಂಡೆ ಆ ಕಣ್ಣಲಿ, ನೋವಿಂದ ಕೇಳಿದೆ ಅಪ್ಪುಗೆಯ,
ಆ ಸಂಜೆ, ಕೊನೆ ಸಂಜೆಯಲ್ಲ ,ಆದರೆ ಮೊದಲ ಸುಸಂಜೆ ಮುಗಿಯದ ಸುಸಂಜೆ.


ಡಿ'ಮೆಲ್ಲೋ